Chi. D. R. Ashwaththanarayana is no more !

ಬೆಂಗಳೂರಿನ ನಮ್ಮ ಮಾವಳ್ಳಿ ಲಕ್ಷ್ಮೀದೇವಕ್ಕನವರ ಮಗ ಶ್ರೀ ಡಿ. ಆರ್. ಅಶ್ವತ್ಥ ನಾರಾಯಣರವರು,  ಸೆಪ್ಟೆಂಬರ್ ೨೮, ೨೦೨೦ ರಂದು, ತೀವ್ರ  ಹೃದಯಾಘಾತದಿಂದ ನಿಧನರಾದರು.  


(೧೪-೦೩-೧೯೫೫-೨೮-೦೮-೨೦೨೦)

ಮಗಳು ಚಿ. ನಾಗಶ್ರೀ, ಅಳಿಯ ಶ್ರೀ ರಾಖೇಶ್  ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ನೌಕರಿಯಲ್ಲಿದ್ದಾರೆ.ಈ ದಂಪತಿಗಳ  ಪುತ್ರ ಚಿ. ಪ್ರಣವ್. ರಾಷ್ಟ್ರವ್ಯಾಪಿ, ವಿಶ್ವವ್ಯಾಪಿ ಕರೋನ ಪಿಡಿಗಿನಿಂದಾಗಿ ಅಶ್ವತ್ಥ ನಾರಾಯಣ ರವರ  ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ, ಮುಂದಿನ ವಾರ ಅವರು ಬರುವುದಾಗಿ ತಿಳಿಸಿರುತ್ತಾರೆ. ಈ ಎಲ್ಲಾ ಬೆಳವಣಿಗೆಗಳೂ ನಮ್ಮೆಲ್ಲರಿಗೆ ಸಮಾಧಾನ ತರುತ್ತಿಲ್ಲ. ಮೇಲಾಗಿ ಕರೋನ ಸಾಂಕ್ರಾಮಿಕ ರೋಗಕ್ಕೆ ಮದ್ದು ಇನ್ನೂ ಮಾರುಕಟ್ಟೆಯಲ್ಲಿ ಬಂದಿಲ್ಲ. 

ಯಾವಾಗಲೂ ಹಸನ್ಮುಖಿ, ಸದಾ ಸಹಾಯ ಮಾಡುವ ಸ್ವಭಾವದವನು, ಇನ್ನೂ ೬೦+ ವಯಸ್ಸು. ಸಮಾಧಾನ ಮತ್ತು ಶಾಂತ. ಸ್ವಭಾವದ ವ್ಯಕ್ತಿ. ಈಚೆಗೆ ಆರೋಗ್ಯದಲ್ಲಿ ಚಿಕ್ಕ ಪುಟ್ಟ ವ್ಯತ್ಯಾಸವಾಗಿತ್ತು. ಔಷಧಿ ತೆಗೆದುಕೊಳ್ಳುತ್ತಿದ್ದ. ಆದರೆ ಹೃದಯಾಘಾತವಾಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಮೊದಲೇ ಕೊನೆಯುಸಿರೆಳೆದ್ದಿದ್ದ. ಇದು ಮನೆಯ ಎಲ್ಲಾ ಸಂಬಂಧಿಗಳು ಸ್ನೇಹಿತರಿಗೆ ಸಿಡಿಲು ಹೊಡೆದ ತರಹ ಆಘಾತವಾಗಿದೆ. ಇನ್ನು ಸದ್ಯದಲ್ಲೇ ಬರುವ ಮಗಳು, ಅಳಿಯ ಮತ್ತು ಮಗುವಿನ ಪರಿಸ್ಥಿತಿಯನ್ನು ಊಹಿಸುವುದು ಕಷ್ಟ. ದೇವರು ಮನೆಯ ಸದಸ್ಯರಿಗೆಲ್ಲ ಈ ನಷ್ಟವನ್ನು ಎದುರಿಸುವ. ಎದೆಗಾರಿಕೆಯನ್ನು  ಕೊಡಲೆಂದು ಬೇಡಿಕೊಳ್ಳುತ್ತೇವೆ. 





Comments

ashvatthana nenepu nammellara hrudayadalli sadaa iruttade. ninage moksha labhisali. ellarigu olleyadaagali.

ninni pritiya venkatesha, Saroja, ravindra, prakasha matti bandhugalu mitravrunda.

om shanti, om shanti, om shanti.

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !