ಶ್ರೀರಂಗ- ಎಂದರೆ, ಪ್ರೀತಿ, ಸಹಾಯ, ಸಹಕಾರ, ಮತ್ತು ಆತ್ಮೀಯತೆಗಳ ಸಮಾವೇಶವಿದ್ದಂತೆ. ಅವನಿಗೆ ಎಲ್ಲರೂ ಬೇಕು. ಯಾವಾಗಲೂ ನಗುಮುಖದ ಅತಿ ಸರಳ ವ್ಯಕ್ತಿ. ಎಲ್ಲಾ ಸಮಯಗಳಲ್ಲೂ ಸಿಗುವ ಮತ್ತು ತಕ್ಷಣವೇ ಕಾರ್ಯೋನ್ಮುಖನಾಗುವ ಚೇತನ.
ಚಿ. ಶ್ರೀರಂಗ
(೨, ಆಗಸ್ಟ್, ೧೯೬೧-೨೯, ರವಿವಾರ, ಆಗಸ್ಟ್, ೨೦೨೧)
ದೇವರಿಂದ, ನಮ್ಮ ಶ್ರೀರಂಗನಿಗೆ ಇಷ್ಟು ಬೇಗ ಕರೆ ಯಾಕೆ ಬಂತು ?ಏಕೆ ಹೀಗಾಯಿತು ? ಇನ್ನೂ ೬೧ ವರ್ಷವಷ್ಟೇ ! ಬದುಕಿ ಬಾಳಬೇಕಾದ ವ್ಯಕ್ತಿ, ಹೀಗೆ ದಿಢೀರನೆ ನಮ್ಮನ್ನೆಲ್ಲ ಆಗಲಿ ಹೋಗುವ ತರಾತುರಿ ಏನಿತ್ತು ? ಎಂದು ಅನ್ನಿಸುವುದು ಸ್ವಾಭಾವಿಕ. ಆದರೆ ವಿಧಿಯ ನಿಯಮವೇ ಬೇರೆ; ಅದನ್ನು ನಮ್ಮಿಂದ ಅಳೆಯುವುದು ಬಹಳ ಕಷ್ಟ. ೨೯ ನೆಯ ತಾರೀಖು, ಆಗಸ್ಟ್, ೨೦೨೧ ರ ಮಧ್ಯಾನ್ಹ ೪-೧೫ ಕ್ಕೆ ಅವನು ತೀವ್ರ ಹೃದಯಾಘಾತದಿಂದ ನಮ್ಮೆಲ್ಲರನ್ನೂ ಆಗಲಿ ಹೋಗಿರುತ್ತಾನೆ. ಅವನನ್ನು ಪರಿಶೀಸಲು ಬಂದ ವೈದ್ಯರು, ಕಾರ್ಯ ನಿರ್ವಹಿಸುವ ಮೊದಲೇ ಅವನು ಇಲ್ಲವಾಗಿದ್ದ. ಶ್ರೀರಂಗಣ್ಣನ ಅಕಾಲಿಕ ನಿಧನದಿಂದ ಮನೆಯವರಲ್ಲದೆ ಸ್ನೇಹಿತರು, ಅಕ್ಕ-ಪಕ್ಕದವರು, ಹಿತೈಷಿಗಳು, ಎಲ್ಲರೂ ಕಂಬನಿಗರೆದರು. ಅವನ ವ್ಯಕ್ತಿತ್ವವೇ ಅಂತಹದು.
ವಯಸ್ಸಾದ ತಂದೆಯವರನ್ನು ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದ. ತಂದೆಯವರಿಗೆ ಆರೈಕೆ ಮಾಡುವುದು, ನೋಡಿಕೊಳ್ಳುವುದು, ಇತ್ತೀಚಿನ ದಿನಗಳಲ್ಲಿ ಅವನ ಜೀವನದ ಬಹುಮುಖ್ಯ ಕಾರ್ಯಗಳಲ್ಲೊಂದಾಗಿತ್ತು.
ಶ್ರೀರಂಗ -ಈಗ ಒಂದು ಹೆಸರು. ಒಬ್ಬ ವ್ಯಕ್ತಿಯ ಸುಂದರ ಹೆಸರು - ಅಪಾರ ಪ್ರೀತಿ, ಸೇವೆ, ಸಹಕಾರ, ಮತ್ತು ಸಹಾಯಕ್ಕೆ ಬಳಸುವ ಪರ್ಯಾಯ ಪದವಾಗಿ ಇಷ್ಟು ಬೇಗ, ನಮ್ಮೆಲ್ಲರಿಂದ ಮರೆಯಾಗಿದ್ದಾನೆ. 'ಅವನ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ದೇವರನ್ನು ಪ್ರಾರ್ಥಿಸುವ',
-ಮನೆಯಲ್ಲಿ ಎಲ್ಲರೂ,
-ಬಂಧು ಮಿತ್ರರು,
ಬಂಧು ಮಿತ್ರರೇ,
ನನ್ನ ಅಣ್ಣ ಶ್ರೀ. ಶ್ರೀರಂಗ ಅವರ ಧರ್ಮೋದಕ ಕಾರ್ಯವನ್ನು ದಿನಾಂಕ ೭ ನೆಯ ತಾರೀಖಿನಂದು ಮಂಗಳವಾರ (7th Sept, 2021) ಬನಶಂಕರಿ ಆರ್ಯಾವರ್ತ ಬೆಂಗಳೂರು
ಹಾಗೂ ವೈಕುಂಠ (ನಾರಾಯಣ ಬಲಿ) ಕಾರ್ಯಕ್ರಮವನ್ನು ದಿನಾಂಕ ೯ ನೆಯ ತಾರೀಖು, ಗುರುವಾರ 9th, Sept, 2021) ಆರ್ಯಾವರ್ತ, ಬನಶಂಕರಿ, ಬೆಂಗಳೂರು ಇಲ್ಲಿ ಏರ್ಪಡಿಸಲಾಗಿದೆ.
-ಶ್ರೀಧರ
ವೈಕುಂಠ ಸಮಾರಾಧನೆಯ ದಿನ ಆಗಮಿಸಿದ್ದ ಬಂಧುಗಳು ಗೆಳೆಯರು : ೯ ರವಿವಾರ, ಸೆಪ್ಟೆಂಬರ್, ೨೦೨೧
ಕ್ರಿಯಾ-ವಿಧಿಗಳನ್ನು ಶ್ರೀರಂಗನ ತಮ್ಮ ಚಿ. ಶ್ರೀಧರ, ಬಹಳ ಶ್ರದ್ಧಾ-ನಿಷ್ಠೆಗಳಿಂದ ನೆರವೇರಿಸಿದ.
ಚಿ. ಶ್ರೀಧರ ಕ್ರಿಯಾ ಕಾರ್ಯದಲ್ಲಿ ತೊಡಗಿರುವುದು
ಚಿ. ಸೌ. ಉಷಾ ಶ್ರೀಧರ್ ದೇವರಪೂಜೆಯಲ್ಲಿ
ಚಿ. ಶ್ರೀಪಾದ ಮತ್ತು ಚಿ. ಅನಂತಮೂರ್ತಿ (ಇತರರ ಹೆಸರುಗಳು ನನಗೆ ತಿಳಿಯದು)
ಚಿ. ಸುಬ್ಬಲಕ್ಷ್ಮಿ ಮತ್ತು ...
ಚಿ. ಸೌ. ಸುಚರಿತ ಅನಂತ ಮೂರ್ತಿ ಮತ್ತು ಗೆಳತಿಯರು.
ಶ್ರೀಮತಿ ರಾಧಮ್ಮನವರು ತಮ್ಮ ಮೊಮ್ಮಗ, ಶ್ರೀರಂಗನನ್ನು ಎತ್ತಿಕೊಂಡಿರುವುದು.
ಚಿ. ರಾಮಕೃಷ್ಣ, ಮಗು ಶ್ರೀರಂಗನನ್ನು ಎತ್ತಿಕೊಂಡು ಸಂಭ್ರಮಿಸುತ್ತಿದ್ದಾರೆ.
ಚಂದ್ರಣ್ಣ, ಪುಟ್ಟ ಮಗು ಚಿ. ಶ್ರೀರಂಗನನ್ನು ತನ್ನ ತೊಡೆಯಮೇಲೆ ಕೂಡಿಸಿಕೊಂಡು ಆನಂದಿಸುತ್ತಿರುವುದು. ಶ್ರೀರಂಗ, ನಮ್ಮ ಮನೆಯಲ್ಲಿ ಮೊಟ್ಟ ಮೊದಲ ಕೂಸು. ಎಲ್ಲರ ಕಣ್ಮಣಿಯಾಗಿದ್ದ.
ಶ್ರೀರಂಗನ ಬಗ್ಗೆ ಕೆಲವು ವಿಷಯಗಳನ್ನು ಇಲ್ಲಿ ದಾಖಲಿಸಬಹುದು :
ಮೊದಲೇ ತಿಳಿಸಿದಂತೆ, ಮಗುವಿಗೆ ಎಲ್ಲಾ ವಿಧದಲ್ಲಿಯೂ ಅತ್ಯುತ್ತಮ ಲಾಲನೆ-ಪಾಲನೆಗಳ ವ್ಯವಸ್ಥೆ ನಡೆಯಿತು.
ಉದಾ : ಆಗ ಬಳಕೆಯಲ್ಲಿದ್ದ (Glaxo Baby milk powder) ಗ್ಲ್ಯಾಕ್ಸೋ ಹಾಲಿನ ಪುಡಿಯ ಬದಲು Cow & Gate ಎಂಬ Brand ನ ವಿದೇಶಿ ಹಾಲಿನ ಪುಡಿಯ ಡಬ್ಬವನ್ನು ಬೆಂಗಳೂರಿನಿಂದ ತರಿಸಲಾಗುತ್ತಿತ್ತು. ಕೆಲವು ಬಾರಿ, ಬೆಂಗಳೂರಿನಲ್ಲೂ ಹಾಲಿನ ಡಬ್ಬ ಸಿಗದೇ ಇದ್ದಾಗ, ಕೆಲವರ Influence, ಕೂಡ ಬಳಸಿದ್ದನ್ನು ನಾವು ಕಾಣುತ್ತಿದ್ದೆವು. ಆಗಲೇ ಅತ್ಯುತ್ತಮ Ready made ಬಟ್ಟೆಗಳು, ಆಟಕೆ ಸಾಮಾನುಗಳು ಇತ್ಯಾದಿಗಳ ವ್ಯವಸ್ಥೆ ಆಗುತ್ತಿತ್ತು.
ಹೊಳಲ್ಕೆರೆಯಿಂದ ಬೆಂಗಳೂರಿಗೆ ಪರಿವಾರವೆಲ್ಲಾ ವಲಸೆಹೋಗುವ ಪ್ರಮೇಯ ಬಂದಾಗಲೂ, Cow & Gate Milk powder, ಹಾಲಿನ ಡಬ್ಬದ ವ್ಯವಸ್ಥೆ ನಿಯಮಿತವಾಗಿಯೇ ಜರುಗುತ್ತಿತ್ತು. ಮಗು, ಶ್ರೀರಂಗನಿಗೆ ಇಂತಹ ವಿಶೇಷ ಸೌಲತ್ತುಗಳು ಸಿಗುತ್ತಿತ್ತು ಎಂದು ಹೇಳಿದರೆ, ಕೆಲವರು ಅದೇನು ಮಹಾ ? ಎಂದು ಹುಬ್ಬು ಹಾರಿಸಬಹುದು ! ಪ್ರತಿ ಪರಿವಾರದಲ್ಲೂ ಮನೆಯ ಚೊಚ್ಚಲ ಮಗುವನ್ನು ಹೀಗೆಯೇ 'ಅಂಗೈನಲ್ಲಿ ಇಟ್ಟುಕೊಂಡು ಮುಂಗೈ ಮುಚ್ಚುತ್ತಾರೆ' ಎಂದು ಹೇಳುವಂತೆ, ಜಾಗರೂಕತೆಯಿಂದ ಪಾಲಿಸುತ್ತಿದ್ದದ್ದನ್ನು ನಾವು ಕಂಡಿದ್ದೇವೆ.
ಚಿ. ಶ್ರೀರಂಗನ ಇತ್ತೀಚಿನ ಫೋಟೋ
ಶ್ರೀರಂಗಣ್ಣ ತಂಗಿ, ಚಿ. ಸೌ. ಹರ್ಷ ಕಳ್ಳಂಬೆಳ್ಳಾ, ಹಾಗೂ ತಮ್ಮ ಚಿ. ಎಚ್. ಏನ್. ಶ್ರೀಧರನ ಜೊತೆಯಲ್ಲಿ
ಶ್ರೀರಂಗ, ಪ್ರತಿದಿನವೂ Whats App ನಲ್ಲಿ ಹಲವಾರು Messages ಗಳನ್ನು ಕಳಿಸುತ್ತಿದ್ದ. ನೀತಿ ಮಾತುಗಳು, ಒಳ್ಳೆಯ Videos ಗಳು, ಇತ್ಯಾದಿ. ತಪ್ಪದೆ Good morning, Good evening ಹೇಳುವುದು ಅವನ ಪರಿಪಾಠವಾಗಿತ್ತು.
Comments
ಅತೀ ಬಲಿಷ್ಠ, ಆರೋಗ್ಯವಂತ ಯುವಕರು ದಿಢೀರನೆ ಮರಣ ಹೊಂದುತ್ತಾರೆ. ಅತಿ ವೃದ್ಧರು ತಮ್ಮ ವಯಸ್ಸಿನ ಭಾರದಿಂದ ಕುಸಿದು ನೆಲಕಂಡವರು ಹತ್ತಾರು ವರ್ಷ ಜೀವಿಸಿರುವ ಘಟನೆಗಳಿವೆ. ವಿಶ್ವವೆಲ್ಲ ದಿನಂಪ್ರತಿ ಕರೋನ ಮಹಾಮಾರಿಯ ಬಗ್ಗೆ ತಲೆಕೆಡಸಿಕೊಳ್ಳುತ್ತಿದ್ದರೆ. ಉಗ್ರಗಾಮಿಗಳು ತಮ್ಮ ಆಯುಧಗಳ ಪ್ರಯೋಗದಿಂದ ತಾವೂ ಸತ್ತು ನೂರಾರು ಅಮಾಯಕರನ್ನು ಬಲಿ ತೆಗೆದುಕೊಳ್ಳಿತ್ತಿರುವುದನ್ನು ನಾವು ನೋಡುತ್ತಿದ್ದೇವೆ, ಮತ್ತು ಕೇಳುತ್ತಿದ್ದೇವೆ. (ಮಾಧ್ಯಮಗಳಲ್ಲಿ) ಏನಿದೆಲ್ಲಾ ? ಅವರ್ಯಾರೂ Mask ಧರಿಸಿ ಮೂಗು ಬಾಯಿ ಮುಚ್ಚಿಕೊಳ್ಳುವ ಬಗ್ಗೆ ಎಲ್ಲೂ ಓದಿಲ್ಲ. ಸ್ನಾನ ಮಾಡುತ್ತಾರೆಯೇ ? ಆಗಾಗ ಕೈತೊಳೆಯುತ್ತಾರೆಯೇ ? ತಮ್ಮ Uniforms ಗಳನ್ನು ಬದಲಾಯಿಸುವರೇ ? ತಿಂಗಳಿಗೊಮ್ಮೆಯೇ ಇವುಗಳ ಬಗ್ಗೆ ಎಲ್ಲಿಯೂ ಆಧಾರಗಳಿಲ್ಲ.
ಯಾರು ಇದನ್ನು ನಿಯಂತ್ರಿಸುತ್ತಿರುವುದು ? ಆ ಮಹಾಚೇತನಕ್ಕೆ ಒಳ್ಳೆಯವರ್ಯಾರು ಕೇಡಿಗಳು ಯಾರು ಎಂದು ತಿಳಿಯುವುದಿಲ್ಲವೇ ?
ಇದಕ್ಕೆ ಉತ್ತರವನ್ನು ಕಂಡುಕೊಂಡವರು ಯಾರೂ ಇಲ್ಲ. ಎಲ್ಲರೂ ತಮ್ಮ ಮನಸ್ಸಿಗೆ ಅನ್ನಿಸಿದಂತೆ ವಿಶ್ಲೇಷಿಸಿ ಹೇಳಿಕೆ ಕೊಡುತ್ತಾರೆ. ವಿಜ್ಞಾನವೂ ಇದಕ್ಕೆ ಉತ್ತರ ಕೊಟ್ಟಿಲ್ಲ.