ಕರ್ಣಾಟಕ ಭಾಗವತ ಪಠಣ ; ಸಂಪುಟ ೧ ಮತ್ತು ೨ !

                      ಕರ್ಣಾಟಕ ಭಾಗವತ ಪಠಣ ; ಸಂಪುಟ ೧ ಮತ್ತು ೨ 

"ಕರ್ಣಾಟಕ ಭಾಗವತ" ಪುಸ್ತಕದ ಸಂಪುಟಗಳನ್ನು ಓದಲು ಕುಳಿತಾಗ, ಆಗುವ ಆನಂದ ಅಪರಿಮಿತ. ಕಾರಣ : ೧. ಕನ್ನಡದಲ್ಲಿ ಲಭ್ಯವಿರುವ ಭಾಗವತದ ಗ್ರಂಥಗಳು, ಮಾಹಿತಿಗಳ ಆಗರವಾಗಿದ್ದರೂ ಹೊರಗೆ ನೋಡಲು ಆಕರ್ಷಣೆ ಇರುವುದಿಲ್ಲ. ಬಳಸಿದ ಕಾಗದದಗುಣಮಟ್ಟ ಕಡಿಮೆ.  ಮುದ್ರಿಸಿದ ಅಕ್ಷರಗಳು ಬಹಳ ಸ್ಫಟವಾಗಿರುವುದಿಲ್ಲ. 

ಆದರೆ ನಾವು ನೋಡುತ್ತಿರುವ ಈ ಭಾಗವತ ಪುಸ್ತಕ, ಅನೇಕ ವಿಶೇಷತೆಗಳನ್ನು ಹೊಂದಿದ್ದು, ಅದನ್ನು ಓದುವುದೇ ಒಂದು ಸಂತಸದ ವಿಷಯ.  ೧. ನಮ್ಮ ದೇಶದ ಭಾಗವತ ಗ್ರಂಥಗಳ ಉಗಮ, ಮತ್ತು ಉಪಲಬ್ಧವಿರುವ ಸಂಪುಟಗಳು, ಕ್ಲಿಷ್ಟ ಪದಗಳ ಅರ್ಥ ವಿವರಣೆ,  ಇದರ ಜತೆಗೆ. ಸೇರಿದ ಹಲವು ವಿಷಯಗಳ ಬಗ್ಗೆ ಸಂಶೋಧನೆ, ಸಂದರ್ಭಯೋಚಿತವಾಗಿ ಬಳಸಿರುವ, ನಮ್ಮ ನಾಡಿನ ಹೆಸರಾಂತ  ದೇವಾಲಯಗಳ ಉತ್ಕೃಷ್ಟ ಭಿತ್ತಿ  ಚಿತ್ರಗಳು, ಉಲ್ಲೇಖಗಳು, ಯುವ ಓದುಗರಿಗೂ ಆಸಕ್ತಿಯನ್ನು ಒದಗಿಸುತ್ತವೆ.  ಪುಸ್ತಕದ ಬಗ್ಗೆ ಹೇಳುವುದೇ ಬೇಡ; ಈಗ ಜಾಗತಿಕ ನಿಲವಿನಲ್ಲಿ ಮೇರು ಸ್ಥಾನವನ್ನು ಗಳಿಸಿರುವ ಬ್ರಿಟಾನಿಕಾ ವಿಶ್ವಕೋಶವನ್ನು ಹೋಲುವ ಪ್ರತಿ ಕನ್ನಡದಲ್ಲಿ ಯಾವುದಾದರೂ ಕೃತಿ ಇದ್ದರೆ, ಅದು ಕರ್ಣಾಟಕ ಭಾಗವತವೆಂದು ಘಂಟಾಘೋಷವಾಗಿ ಹೇಳಬಹುದು. ಇದರ ಲಿಪಿಕಾರ, ಡಾ. ಎಚ್. ಆರ್. ಚಂದ್ರಶೇಖರ್ ತಮ್ಮ ಜೀವನದ ೧೩ ವರ್ಷಗಳ ಅಮೂಲ್ಯ ಸಮಯವನ್ನು ಇದನ್ನು ಹೊರತರಲು ಶ್ರಮಿಸಿದ್ದಾರೆ.  ಇವರ ಕಾರ್ಯದಲ್ಲಿ ಹಲವಾರು ಜನ ಕೈಜೋಡಿಸಿ ಹರಸಿದ್ದಾರೆ. ಅಮೆರಿಕ ಸಂಯುಕ್ತ ಸಂಸ್ಥಾನದ ಹೂಸ್ಟನ್ ಕನ್ನಡ ಸಂಘ ೧೦,೦೦೦ ರೂಪಾಯಿಗಳ ನೆರವನ್ನು ನೀಡಿ ಪ್ರೋತ್ಸಾಹಿಸಿದೆ. ಈ ಕೃತಿಯನ್ನು ಸಮಗ್ರವಾಗಿ ಪರಿಷ್ಕರಿಸಲು ಡಾ. ವೆಂಕಟಾಚಲ ಶಾಸ್ತ್ರಿಯವರ ನೇತೃತ್ವದಲ್ಲಿ  ಒಂದು ವಿದ್ವತ್ ತಂಡವನ್ನು  ರಚಿಸಲಾಗಿತ್ತು.  ಅಮೆರಿಕದಲ್ಲಿ ಚಂದ್ರಶೇಖರ್,  (ಯುನಿವರ್ಸಿಟಿ ಆಫ್ ಮಿಸ್ಸೂರಿಯ  ಭೌತ ಶಾಸ್ತ್ರದ ವಿಭಾಗದ ಮುಖ್ಯಸ್ಥ)  ಭಾರತದ ಬೆಂಗಳೂರಿನಲ್ಲಿ  ಸಂಪಾದಕೀಯ ತಂಡ. ಹೀಗೆ ಇವೆರಡನ್ನೂ ಸಮನ್ವಯಗೊಳಿಸಲು ಇಂಟರ್ನೆಟ್ ಪರಿಣಿತಿಯನ್ನು ಸಮಯೋಚಿತವಾಗಿ ಬಳಸಲಾಗಿತ್ತು. 

-HRL



















Comments

It was really an Indo-American Project of very high relevance !

Popular posts from this blog

ಹೊಳಲ್ಕೆರೆ ಸುತ್ತ-ಮುತ್ತ, ಮಾಳೇನಹಳ್ಳಿ, ಮತ್ತು ಅಲ್ಲಿನ ಹತ್ತಿರದ ಜಾಗಗಳು !

ನಮ್ಮ ಪ್ರೀತಿಯ ಸುನಂದಮ್ಮ ಅತ್ತಿಗೆಯವರ ವರ್ಷಾಂತ್ಯ ವಿಧಿ, ವರ್ಷ ೨೦೨೧ ರ ಏಪ್ರಿಲ್ ತಿಂಗಳಿನ ೧೨ ನೆಯ ತಾರೀಖಿನಂದು (ಸೋಮವಾರ) ಬೆಂಗಳೂರಿನ ಬಸವನಗುಡಿಯಲ್ಲಿರುವ ಸುಬ್ರಹ್ಮಣ್ಯಸ್ವಾಮಿ ಮಠದ ೨ ನೇ ಮಹಡಿಯಲ್ಲಿ ಮಧ್ಯಾನ್ಹ ಜರುಗಿತು.

ಚಿ. ಶ್ರೀಧರನ ಹೊಸ ಮನೆಯ ಗೃಹ ಪ್ರವೇಶದ ಶುಭ ಸಂದರ್ಭ 16th, December, 2020, Wednesday !