ಸೌ ಉಷಾ ಶ್ರೀಧರ, ಯೋಗ ಶಿಕ್ಷಣ ಪಡೆದು ಪದವಿಯನ್ನು ಗಳಿಸಿದ್ದಾಳೆ. ಮುಂದೆ ಯೋಗಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಾಳೆ....
ನಮ್ಮ ಸುಂಕದ ಶ್ಯಾನುಭೋಗರ ವಂಶದಲ್ಲಿ ಯೋಗಾಭ್ಯಾಸ ಮಾಡಿದ ಯುವ-ವ್ಯಕ್ತಿಗಳ ಹೆಸರುಗಳು ದಾಖಲಾಗಿರುವ ಬಗ್ಗೆ ಮಾಹಿತಿಗಳಿಲ್ಲ.
ನಮ್ಮ ವಂಶದವರೇ ಆದ ಶ್ರೀ. ಶಂಕರಲಿಂಗ ಭಾಗವಾನರೆಂದು ಪ್ರಸಿದ್ಧರಾಗಿದ್ದ ರಂಗಪ್ಪನವರು, ಯತಿಗಳು. ಅವರು ಮಾಳೇನಹಳ್ಳಿ, ಮತ್ತು ಕೋಮಾರನ ಹಳ್ಳಿಯಲ್ಲಿ ಆಶ್ರಮಗಳನ್ನು ಸ್ಥಾಪಿಸಿ ಭಕ್ತರನ್ನು ಆಶೀರ್ವದಿಸಿದ್ದರು. ನಾಥಪಂಥದಲ್ಲಿ ಅವರಿಗೆ ಅಪಾರ ಭಕ್ತಿ ಶ್ರದ್ಧೆಗಳಿದ್ದವು. ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮವನ್ನು ಸ್ಥಾಪಿಸಿದ ಶ್ರೀ. ರಾಘವೇಂದ್ರ ಸ್ವಾಮಿಗಳು ಶ್ರೀ. ಶಂಕರ ಲಿಂಗ ಭಗವಾನರ ಅನುಯಾಯಿಯಾಗಿದ್ದರು.
ಶ್ರೀಮತಿ ಉಷಾ ಶ್ರೀಧರ ಯೋಗದಲ್ಲಿ ಆಸಕ್ತಿವಹಿಸಿ ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದಲ್ಲಿ ಸೇರಿ ಅಧ್ಯಯನ ನಡೆಸಿ ಒಂದು ಪದವಿಯನ್ನು ಪಡೆದಿದ್ದಾರೆ. ಇದು ನಮಗೆಲ್ಲಾ ಹೆಮ್ಮೆಯ ವಿಷಯವಾಗಿದೆ. ನಮ್ಮ ದಾಯಾದಿಗಳಲ್ಲಿ ಒಬ್ಬರಾದ ಶ್ರೀ. ಸಿ. ಎಂ. ಭಟ್ಟರು ಯೋಗಾಚಾರ್ಯರೆಂದು ಪ್ರಸಿದ್ದರಾಗಿದ್ದರು. ಅವರು ಚಿತ್ರದುರ್ಗದಿಂದ ಮೈಸೂರಿಗೆ ಹೋಗಿ ತಮ್ಮ ಚಿಕ್ಕ ಪ್ರಾಯದಲ್ಲಿಯೇ ಸಂಸ್ಕೃತವನ್ನು ಕಲಿತರು. ಯೋಗಾಚಾರ್ಯ ಶ್ರೀ. ಷ್ಣಮಾಚಾರ್ಯರು ಉತ್ತರ ಭಾರತದಿಂದ ಮೈಸೂರಿಗೆ ಆಗಮಿಸಿ ಅರಮನೆಯ ಯೋಗ ಶಿಕ್ಷಣ ಶಾಲೆಯಮೇಲ್ವಿಚಾರಣೆಯನ್ನು ಕೈಗೆತ್ತಿಕೊಂಡಮೇಲೆ ಯುವ ಸಂಸ್ಕೃತ ಪಂಡಿತ ಶ್ರೀ ಮಹಾದೇವ ಭಟ್ಟರು ಕೃಷ್ಣಮಾಚಾರ್ಯರ ಮಾರ್ಗದರ್ಶನದಲ್ಲಿ ಯೋಗವಿದ್ಯೆಯನ್ನು ಕಲಿತು, ಮುಂದೆ ಮುಂಬಯಿ ಮಹಾನಗರಕ್ಕೆ ಹೋಗಿ ಅಲ್ಲಿನ ನಾಗರಿಕರಿಗೆ, ಯೋಗಾಸಕ್ತರಿಗೆ ದಶಕಗಳ ಕಾಲ ಯೋಗವಿದ್ಯೆಯನ್ನು ಕಲಿಸಿದರು.
ಯೋಗದ ಮಾತು ಬಂದಿದ್ದರಿಂದ ಈ ಕೆಲವು ಹಳೆಯ ನೆನಪುಗಳನ್ನು ಮೆಲುಕುಹಾಕಬೇಕಾಯಿತು.
ಸೌ. ಉಷಾ ಶ್ರೀಧರ್ ರವರಿಗೆ ನಮ್ಮ ಸುಂಕದವರ ಪರಿವಾರದಿಂದ ಶುಭಾಶಯಗಳನ್ನು ಕೋರಿ ಆಶೀರ್ವದಿಸುತ್ತೇವೆ. ಇದು ಒಳ್ಳೆಯ ಪ್ರಯತ್ನ, ಅದರ ಸದುಪಯೋಗವನ್ನು ಯೋಗಾರ್ಥಿಗಳು ಪಡೆಯಲೆಂದು ಹಾರೈಸುತ್ತೇವೆ. ಯೋಗ ಶಿಕ್ಷಣಕ್ಕೆ ಪ್ರಸಕ್ತ ಸರ್ಕಾರ ವಿಶೇಷ ಪ್ರೋತ್ಸಾಹವನ್ನು ಕೊಡುತ್ತಿದೆ. ಯೋಗವಿದ್ಯೆಯಿಂದ ಹಲವಾರು ಕಾಯಿಲೆಗಳನ್ನು ಗುಣಪಡಿಸಬಹುದೆಂದು ಅನೇಕ ಸಾಧಕರು ತೋರಿಸಿಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಅನುಸಂಧಾನಗಳು ಮತ್ತು ಅಧ್ಯಯನಗಳು ಬೇಕಾಗಿದೆ.
Comments
-Ecchaarel