ನಮ್ಮ ಪ್ರೀತಿಯ ವಿಶ್ವಣ್ಣ (ಎಚ್. ಆರ್. ವಿಶ್ವನಾಥರಾವ್) ೨೦ ನೆಯ ಗುರುವಾರ, ಜುಲೈ ೨೦೨೩ ರ ಮಧ್ಯಾನ್ಹ ೨-೪೫ ಕ್ಕೆ ವಿಧಿವಶರಾದರು.
ನಮ್ಮ ಪ್ರೀತಿಯ ವಿಶ್ವಣ್ಣ (ಎಚ್. ಆರ್. ವಿಶ್ವನಾಥರಾವ್) ೨೦ ನೆಯ ತಾರೀಖು, ಗುರುವಾರ, ಜುಲೈ ೨೦೨೩ ರ ಮಧ್ಯಾನ್ಹ ೨-೪೫ ಕ್ಕೆ ವಿಧಿವಶರಾದರು. ಹೊಳಲ್ಕೆರೆಯ ನಮ್ಮ ಸುಂಕದವರ ವಂಶದ ಅಣ್ಣ-ತಮ್ಮಂದಿರೆಲ್ಲಾ ಮರಣಿಸಿದ ಮೇಲೆ ಹಿರಿಯರಾದ ಅವರೇ ಕೊನೆಯ ಕೊಂಡಿಯಂತಿದ್ದರು. ವಿಶ್ವಣ್ಣನವರ ನಿಧನದಿಂದಾಗಿ ನಮ್ಮೆಲ್ಲರಿಗೆ ದಿಗ್ದರ್ಶನ ಮಾಡುವ ಹಿರಿಯರ ಉಪಸ್ಥಿತಿ ಇಲ್ಲದಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ.
-ಸುಂಕದ ವಂಶದ ಶ್ಯಾನುಭೋಗರ ಮನೆತನದವರು.
ನಮ್ಮ ಪೂಜ್ಯ ತಂದೆಯವರಾದ ಹೆಚ್.ಆರ್. ವಿಶ್ವನಾಥ ಅವರು ದಿನಾಂಕ 2೦-೦7-2023ರಂದು ಗುರುವಾರ ಮಧ್ಯಾಹ್ನ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ತತ್ಸಂಬಂಧವಾಗಿ ಉತ್ತರಕ್ರಿಯಾದಿ ಕಾರ್ಯಗಳನ್ನು 'ಮೋಕ್ಷಧಾಮ, ನಾಗರಬಾವಿ, ಬೆಂಗಳೂರು' ಇಲ್ಲಿ ಕೆಳಕಂಡಂತೆ ನೆರವೇರಿಸಲಾಗುವುದು.
* ದಿನಾಂಕ 29-07-2023 ಶನಿವಾರ 'ಧರ್ಮೋದಕ' (ಬೇಳಿಗ್ಗೆ 9 ರಿಂದ 11.0 ಗಂಟೆ)
* ದಿನಾಂಕ 01-08-2023 ಮಂಗಳವಾರ 'ಮಾಸಿಕ' (ಬೆಳಿಗ್ಗೆ 11.30 ರಿಂದ 1.0 ಗಂಟೆ)
* ದಿನಾಂಕ 02-08-2023 ಬುದವಾರ 'ವೈಕುಂಠ ಸಮಾರಾಧನೆ' (ಬೆಳಿಗ್ಗೆ 11.30 ರಿಂದ 1.0 ಗಂಟೆ)
ಹೆಚ್. ವಿ. ರಮೇಶ್ ಮತ್ತು ಹೆಚ್.ವಿ. ಲಕ್ಷ್ಮೀಶ
* 9448769069
* 9448060332
ಎಲ್ಲಾ ವಿಧಿ ವಿಧಾನಗಳೂ ಪೂರ್ವನಿಯೋಜನೆಯ ಪ್ರಕಾರ ನೆರವೇರಿದವು. ಹಾಗೆಯೇ ವೈಕುಂಠ ಸಮಾರಾಧನೆಯೂ ೨, ಆಗಸ್ಟ್, ಬುಧವಾರ, ೨೦೨೩ ರಂದು ಸಂಪನ್ನಗೊಂಡಿತು. ಬಂಧು-ಮಿತ್ರರು ಆ ಸಮಯದಲ್ಲಿ ಬಂದಿದ್ದು ಕಾರ್ಯಕ್ರಮವನ್ನು ಬಹಳ ಅರ್ಥಪೂರ್ಣವಾಗಿ ನಡೆಸಲು ಎಲ್ಲಾ ವಿಧಗಳಲ್ಲಿಯೂ ಸಹಕರಿಸಿದರು.
ವೀಡಿಯೋ ಕೊಂಡಿ : https://youtube.com/shorts/Ed--wQCwQNs?feature=share
Comments
ಅವಳಿ-ಜವಳಿಯಾಗಿ ಜನಿಸಿದವರಲ್ಲೂ ಸಹಿತ ಕೆಲವು ಬಾರಿ ಕೆಲವಾರು ವ್ಯತ್ಯಾಸಗಳನ್ನು ನಾನು ಕಂಡಿದ್ದೇನೆ. ನಮ್ಮ ಮನೆಯಲ್ಲೇ ನನ್ನ ತಮ್ಮ ಚಂದ್ರಶೇಖರನ ಹೆಣ್ಣು ಮಕ್ಕಳನ್ನೇ ಉದಾಹರಣೆಗೆ ತೆಗೆದುಕೊಂಡರೆ, ರಜನಿ ಮತ್ತು ಇಂದು ಅವಳಿ ಸೋದರಿಯರು. ಬಾಲ್ಯದಲ್ಲಿ 'ಒಂದೇ ತರಹದ ಪಡಿಯಚ್ಚುಗಳು' ಎಂದು ನೋಡುಗರಿಂದ ಮೆಚ್ಚುಗೆ ಗಳಿಸುತ್ತಿದ್ದರು. ಆದರೆ ಅವರು ಪ್ರಬುದ್ಧರಾಗಿ ಬೆಳೆದಮೇಲೆ, ಇಂದು ಎತ್ತರದ ವ್ಯಕ್ತಿ.; ರಜನಿ ಕುಳ್ಳಿ- ಇಂದುವಿಗೆ ಹೋಲಿಸಿದರೆ !
ಇವೆಲ್ಲ ಪುರಾಣ ಹೇಳದೆ ನನ್ನ ಮಾತನ್ನು ಸಾಬೀತು ಮಾಡಲು ಸಾಧ್ಯವಾಗದಿರುವುದರಿಂದ ಇಷ್ಟೆಲ್ಲಾ ಪೀಠಿಕೆ ಹೇಳಬೇಕಾಗಿ ಬಂತು ! ಮೊದಲು ಫೋಟೋ ನೋಡಿದಾಗ ಫೋಟೋದಲ್ಲಿ ಕುಳಿತಿರುವ ವ್ಯಕ್ತಿ ನಮ್ಮ ಶ್ರೀಮತಿ ರತ್ನಮ್ಮನವರ ಮಗ, ಭೂಷಣ್ ಎಂದು ನನಗೆ ನಿನ್ನೆ ಅನ್ನಿಸಿತ್ತು. ರಾತ್ರಿ ಯೋಚನೆಮಾಡಿದಾಗ ಅವನು ಈ ಸಮಾರಂಭಕ್ಕೆ ಬರುವ ಪ್ರಮೇಯವಿಲ್ಲ. ಅತಿ ದೂರದ ಸಂಬಂಧ. ಈಗ ಬೇರೆ ಕೋಣದಿಂದ ನೋಡಿದಾಗ ಖಂಡಿತ ಅವನು ಭೂಷಣ್ ಅಲ್ಲ ಎಂದು ಮನವರಿಕೆಯಾಯಿತು. ಖಚಿತಪಡಿಸಿಕೊಳ್ಳಲು ನಾನು ಶ್ರೀಧರ್ ನನ್ನ ವಿಚಾರಿಸುವನಿದ್ದೆ.
-ಚಿಕ್ಕಪ್ಪ